ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಕುರಿತಾಗಿ ಅನೇಕ ಸಿನಿಮಾಗಳು ಬಂದಿವೆ. ಆದರೆ ಇದೀಗ ವೆಬ್ ಸೀರೀಸ್ ಒಂದು ನಿರ್ಮಾಣವಾಗಲಿದ್ದು, ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ವೆಬ್ ಸೀರೀಸ್ ನಿರ್ಮಾಣವಾಗಲಿದೆ. ವೀರಪ್ಪನ್ ಕುರಿತಾಗಿ ಕನ್ನಡದಲ್ಲಿ ಈ ಹಿಂದೆ ಅಟ್ಡಹಾಸ ಎಂಬ ಸಿನಿಮಾ ಮಾಡಿದ್ದ ಎಂಎಸ್ ರಮೇಶ್ ಅವರೇ ಈ ವೆಬ್ ಸರಣಿಯನ್ನು ನಿರ್ದೇಶಿಸಲಿದ್ದಾರೆ. ಆ ಸಿನಿಮಾದಲ್ಲಿ ವೀರಪ್ಪನ್ ಪಾತ್ರ ಮಾಡಿದ್ದ ಕಿಶೋರ್ ಇಲ್ಲೂ ಅಭಿನಯಿಸಲಿದ್ದಾರೆ. ಒಟ್ಟು 45