ಅನಂತ್ ನಾಗ್ ಎಲ್ಲಿರುತ್ತಾರೋ ಅಲ್ಲಿ ಹೊಸತನವಿರುತ್ತೆ. ಅವರೊಂದು ಚಿತ್ರ ಒಪ್ಪಿಕೊಂಡರೆಂದರೆ ತಾನೇ ತಾನಾಗಿ ಅದಕ್ಕೊಂದು ತೂಕವೂ ಬಂದು ಬಿಡುತ್ತೆ. ಯಾಕೆಂದರೆ ಅವರು ಯಾವ ಚಿತ್ರಗಳನ್ನೂ ಸುಮ್ಮನೇ ಒಪ್ಪಿಕೊಳ್ಳುವವರಲ್ಲ. ಗಟ್ಟಿ ಕಥೆಯಿಲ್ಲದ ಚಿತ್ರಗಳನ್ನು ಅವರು ಒಪ್ಪಿಕೊಳ್ಳುವುದೂ ಇಲ್ಲ. ಈ ವಾರ ಬಿಡುಗಡೆಯಾಗಲಿರೋ ವೀಕೆಂಡ್ ಚಿತ್ರವನ್ನೂ ಕೂಡಾ ಅವರು ಅದೇ ರೀತಿಯಲ್ಲಿ ಅಳೆದೂ ತೂಗಿ ಮೆಚ್ಚಿಕೊಂಡೇ ಒಪ್ಪಿಕೊಂಡಿರೋದು ವಿಶೇಷ. ಟೆಕ್ಕಿಗಳ ವೀಕೆಂಡ್ ಮೋಜು ಮಸ್ತ್ತಿಯ ಸುತ್ತಾ ಒಂದಿಡೀ ಬದುಕಿನ ಅನಾವರಣದಂತೆ ಈ ಸಿನಿಮಾ