ಸುರೇಶ್ ಶೃಂಗೇರಿ ನಿರ್ದೇಶನದ ವೀಕೆಂಡ್ ಚಿತ್ರ ಹಂತ ಹಂತವಾಗಿ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದು ಈ ವಾರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಟೆಕ್ಕಿಗಳ ಬದುಕಿನೊಳಗೆ ಇಣುಕು ನೋಟ ಬೀರಿರುವ ಈ ಚಿತ್ರ ಯುವ ತುಮುಲಗಳ ರೋಚಕವಾದ ಕಥಾ ಹಂದರವನ್ನೊಳಗೊಂಡಿದೆ. ಅದರ ಝಲಕ್ಕುಗಳು ಟ್ರೈಲರ್ ಮೂಲಕವೇ ಅನಾವರಣಗೊಂಡು ಪ್ರೇಕ್ಷಕರೆಲ್ಲ ವೀಕೆಂಡಿನತ್ತ ಚಿತ್ತ ನೆಟ್ಟು ಕೂರುವಂತಾಗಿದೆ. ಮಂಜುನಾಥ್ ಮಯೂರ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶೃಂಗೇರಿ ಸುರೇಶ್