ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸ್ಯಾಂಡಲ್ ವುಡ್ ಸ್ಟಾರ್ ಗಳದ್ದೇ ಕಾರ್ಯಕ್ರಮವಾಗುತ್ತಿದೆ ಎಂದು ವೀಕ್ಷಕರು ಎಷ್ಟೇ ಅಪಸ್ವರವೆತ್ತಿದರೂ ವಾಹಿನಿ ಮತ್ತೆ ಮತ್ತೆ ಸಿನಿಮಾ ನಟರನ್ನೇ ಕರೆಸಿಕೊಳ್ಳುತ್ತಿದೆ. ಈ ವಾರದ ಸಾಧಕನಾಗಿ ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ನಾಯಕನ ಪಟ್ಟಕ್ಕೇರಿದ ಶರಣ್ ಅವರನ್ನು ಸಾಧಕರ ಸೀಟ್ ಗೆ ಕರೆಸಿರುವುದು ವೀಕ್ಷಕರು ಕೆಂಡಾಮಂಡಲರಾಗುವಂತೆ ಮಾಡಿದೆ.ನಿಮಗೆ ಸಿನಿಮಾದವರು ಬಿಟ್ರೆ ಬೇರೆ ಯಾರೂ ಸಿಗಲ್ವಾ