ನಟಿ ಸಮಂತಾ ಕೇಳಿದ ಈ ಪ್ರಶ್ನೆಗೆ ಚಿರಂಜೀವಿ ಹೇಳಿದ್ದೇನು?

ಹೈದರಾಬಾದ್| pavithra| Last Modified ಬುಧವಾರ, 6 ಜನವರಿ 2021 (10:20 IST)
ಹೈದರಾಬಾದ್ : ತೆಲುಗು ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ನಟಿ ಸಮಂತಾ ಅಕ್ಕಿನೇನಿ ‘ಸ್ಯಾಮ್ ಜಾಮ್’ ಎಂಬ ಟಾಕ್ ಶೋ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ಭಾಗವಹಿಸಿದ್ದಾರೆ.
ಈ ಸಂಚಿಕೆಯಲ್ಲಿ ಭಾಗವಹಸಿದ ನಟ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ವೃತ್ತಿ, ವೈಯಕ್ತಿಕ ಜೀವನ ಮತ್ತು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ನಟ ಚಿರಂಜಿವಿ ಅವರ ಬಳಿ “ ಜೀವನವನ್ನು ರಿವೈಂಡ್ ಮಾಡಲು ನಿಮಗೆ ಅವಕಾಶವಿದ್ದರೆ ನೀವು ಏನು ಬದಲಾಯಿಸಲು ಬಯಸುತ್ತೀರಿ? ಎಂದು ಸಮಂತಾ ಕೇಳಿದ್ದಾರೆ.> > ಇದಕ್ಕೆ ಉತ್ತರಿಸಿದ ಚಿರಂಜೀವಿ, ‘ಈ ಅವಕಾಶ ನಿಜವಾಗಿಯೂ ನನಗೆ ಸಿಕ್ಕರೆ ನಾನು ನಿಖರವಾಗಿ ಒಂದು ವರ್ಷ ಹಿಂದಕ್ಕೆ ಹೋಗಿ ಚೀನಾದಲ್ಲಿ ಕರೋನಾ ವೈರಸ್ ಸೋರಿಕೆಯಾದ ಕಾರಣ  ವೈರಸ್ ಹೊರಬರದಂತೆ ತಡೆಗೋಡೆ ಕಟ್ಟಲು ಬಯಸುತ್ತೇನೆ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :