ಕೊವಿಡ್ 19 ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಟ ಮಹೇಶ್ ಬಾಬು ಹೇಳಿದ್ದೇನು ?

ಹೈದರಾಬಾದ್| pavithra| Last Modified ಮಂಗಳವಾರ, 27 ಏಪ್ರಿಲ್ 2021 (11:01 IST)
ಹೈದರಾಬಾದ್ : ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಟಾಲಿವುಡ್ ನಟ ಮಹೇಶ್ ಬಾಬು ಅವರು ಕೊವಿಡ್ 19 ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದಾರಂತೆ.

ಈ  ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿದ ನಟ ಮಹೇಶ್ ಬಾಬು ಅವರು, ನಾನು ಲಸಿಕೆ ತೆಗೆದುಕೊಂಡೆ , ನೀವು ತೆಗೆದುಕೊಂಡು ಸುರಕ್ಷಿತರಾಗಿರಿ. ಕೊರೊನಾ 2ನೇ ಅಲೆ ತೀವ್ರವದ ಕಾರಣ ಲಸಿಕೆ ಪಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.

ಹಾಗೇ ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಕಾರಣ ಮೇ1ರಿಂದ 18 ವರ್ಷ ಮೇಲ್ಪಟ್ಟ  ಪ್ರತಿಯೊಬ್ಬರು ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ. ಹಾಗಾಗಿ ಎಲ್ಲರೂ ಸುರಕ್ಷಿತರಾಗಿರಲು ಲಸಿಕೆ ಹಾಕಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :