Widgets Magazine

ಪವನ್ ಕಲ್ಯಾಣ್ ಮತ್ತು ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು?

ಹೈದರಾಬಾದ್| pavithra| Last Modified ಗುರುವಾರ, 30 ಜುಲೈ 2020 (12:44 IST)
ಹೈದರಾಬಾದ್ :  ಸಿನಿಮಾ ವಿಚಾರಕ್ಕೆ ನಟ ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಡುವಿನ ಜಗಳ ಮತ್ತಷ್ಟು ಹೆಚ್ಚಾಗುತ್ತಿದ್ದು. ಇದೀಗ ಇವ ರ ಕಿತ್ತಾಟದ ಬಗ್ಗೆ ಬಹು ಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು. ಪವನ್ ಕಲ್ಯಾಣ್ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಪವರ್ ಸ್ಟಾರ್’ ಸಿನಿಮಾ ಮಾಡಿದ್ದು, ಇದು ಪವನ್ ಕಲ್ಯಾಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಪವನ್ ಕಲ್ಯಾಣ್ ಅಭಿಮಾನಿಗಳು ಆರ್ ಜಿವಿ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದರು. ಇದೀಗ ರಾಮ್ ಗೋಪಾಲ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಕಾಶ್ ರೈ,  ಪವನ್ ಕಲ್ಯಾಣ್ ಅಭಿಮಾನಿಗಳು ಆರ್ ಜಿವಿ ಬಗ್ಗೆ ಸಿನಿಮಾ ಮಾಡುವುದು ಒಳ್ಳೆಯ ವಿಚಾರವೇ. ಆದರೆ ಪರಸ್ಪರ ಸ್ಪರ್ಧೆ ಇರಲಿ ಆದರೆ ಅದು ಆರೋಗ್ಯಕರವಾಗಿರಲಿ. ಹಾಗೇ ಪವನ್ ಕಲ್ಯಾಣ್ ಬಗ್ಗೆ ವರ್ಮಾ ಕೆಟ್ಟದಾಗಿ ತೋರಿಸಿದರೂ ಸಹ ಪವನ್ ಕಲ್ಯಾಣ್ ಗೌರವ ಇಂಚು ಸಹ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :