ಉಡುಪಿ : ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ ಬಾರೀ ಸದ್ದು ಮಾಡುತ್ತಿದ್ದು ಇದೀಗ ಹಿರಿಯ ನಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ಸಮೀಪದ ನಾಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣಿಗಾಗುವ ಚಿತ್ರಹಿಂಸೆ, ದೌರ್ಜನ್ಯಗಳ ವಿರುದ್ಧ ದನಿಯೆತ್ತಲು ಅಭಿಯಾನ ಬಲ ತಂದುಕೊಟ್ಟಿದೆ. ಹೀಗಾಗಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮುಕ್ತವಾಗಿ ಹೇಳಲು ಮುಂದೆ ಬಂದಾಗ ಆಕೆಗೆ ಬೆಂಬಲ ನೀಡಬೇಕು.