ಕುರುಕ್ಷೇತ್ರ ಚಿತ್ರದ ವಿವಾದದ ಬಗ್ಗೆ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದೇನು?

ಬೆಂಗಳೂರು, ಸೋಮವಾರ, 16 ಜುಲೈ 2018 (09:08 IST)

ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ದ ಫಸ್ಟ್​ ಲುಕ್​ ಟೀಸರ್ ​​ನಿಂದ ಕಿರಿಕ್ ವೊಂದು ಶುರುವಾಗಿದ್ದು, ಇದೀಗ ಈ ವಿವಾದದ ಬಗ್ಗೆ ಚಿತ್ರದ ಹಾಗೂ ಶಾಸಕ ಪ್ರತಿಕ್ರಿಯೆ ನೀಡಿದ್ದಾರೆ.


ಕುರುಕ್ಷೇತ್ರ ಫಸ್ಟ್ ಲುಕ್​​​ ಟೀಸರ್​ ರಿಲೀಸ್​ ಆಗಿ, ಒಳ್ಳೆ ರೆಸ್ಪಾನ್ಸ್​ ಕೂಡ ಸಿಕ್ಕಿತ್ತು. ಆದ್ರೆ ಕುರುಕ್ಷೇತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ ಟೀಸರ್​ ದರ್ಶನ್​​​ ಟೀಸರ್ ಗಿಂತ ಹೆಚ್ಚು ಪಾಪ್ಯುಲರ್​ ಆಗಿತ್ತು. ಕುರುಕ್ಷೇತ್ರ ಸಿನಿಮಾದಲ್ಲಿ ಅಷ್ಟು ಪ್ರಾಮುಖ್ಯತೆ​​​ ಇಲ್ಲದ ಅಭಿಮಾನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ  ನಿಖಿಲ್​​ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಕುಮಾರ ಸ್ವಾಮಿ ಅವರನ್ನ ಓಲೈಸೋ ಸಲುವಾಗಿ ನಿಖಿಲ್​ ಪಾತ್ರವನ್ನ ಹೆಚ್ಚಾಗಿ ಬಿಂಬಿಸಲಾಗಿದೆ. ಈ ಕಾರಣದಿಂದ ನಟ ದರ್ಶನ್ ಚಿತ್ರದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.


ಆದರೆ, ಈ ವಿವಾದದ ಸುದ್ದಿ ಬಗ್ಗೆ ಇದೀಗ ಚಿತ್ರದ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ''ಕುರುಕ್ಷೇತ್ರ' ಸಿನಿಮಾ ಕಾಲ್ಪನಿಕ ಕಥೆ ಅಲ್ಲ, ಇದು ಮಹಾಭಾರತದ ಕಥೆ. ಹೀಗಿದ್ದ ಮೇಲೆ ಇಲ್ಲಿ ಯಾರ ಪಾತ್ರವನ್ನು ಹೆಚ್ಚಿಸಲು, ಯಾರ ಪಾತ್ರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ವಿವಾದ ಆಗಿರುವ ಸುದ್ದಿ ಸುಳ್ಳು. ದರ್ಶನ್ ಚಿತ್ರದ ಬಗ್ಗೆ ಮುನಿಸಿಕೊಂಡಿಲ್ಲ. ಇದು ಅವರ 50ನೇ ಸಿನಿಮಾ’ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

'ರುಸ್ತುಂ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಬಾಲಿವುಡ್ ನಟನ ಎಂಟ್ರಿ

ಬೆಂಗಳೂರು : ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಿಂದ ಹಲವು ನಟರನ್ನು ಕರೆತರಲಾಗಿತ್ತು. ಇದೀಗ ನಟ ...

news

ಮಂಡ್ಯ ಜಿಲ್ಲೆಯ ಬಡ ಜನರಿಗೆ ಆಲಿಯಾಭಟ್ ಮಾಡಿದ ಸಹಾಯವಾದರೂ ಏನು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ವಿದ್ಯುತ್ ಒದಗಿಸುವ ಮೂಲಕ ...

news

ತನಗಿರುವ ಕೆಟ್ಟ ಚಟವೊಂದರ ಬಗ್ಗೆ ಹೇಳಿಕೊಂಡ ನಟ ರಣಬೀರ್ ಕಪೂರ್

ಮುಂಬೈ : ಕೆಲವರಿಗೆ ಯಾವುದೇ ರೀತಿಯ ಕೆಟ್ಟ ಚಟಗಳಿದ್ದರೆ ಅದನ್ನು ಅವರು ಬಹಿರಂಗವಾಗಿ ಎಲ್ಲೂ ...

news

ಟ್ರೋಲಿಗರಿಗೆ ಖಡಕ್ ತಿರುಗೇಟು ನೀಡಿದ ನಟಿ ಇಲಿಯಾನ

ಮುಂಬೈ : ಬಾಲಿವುಡ್ ನಟಿ ಇಲಿಯಾನ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ...