ಬೆಂಗಳೂರು : ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ಅವರೇ ಸ್ಪೂರ್ತಿ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಇಂಪನಾ ಜಯರಾಜ್ ಅವರು ರೆಹಮಾನ್ ಅವರ 7 ಅಡಿ ಎತ್ತರದ ಭಾವಚಿತ್ರವನ್ನು ರಚಿಸಿದ್ದು ಅದನ್ನು ಈಗ ಅರ್ಜುನ್ ಜನ್ಯ ಅವರು ಪಡೆದಿದ್ದಾರೆ. ಅದರಲ್ಲಿ ರೆಹಮಾನ್ ಅವರು ಸಹಿ ಮಾಡಿದ್ದನ್ನು ಕಂಡು ಜನ್ಯ ಅವರು ತುಂಬಾ ಸಂತೋಷಗೊಂಡಿದ್ದಾರೆ.