ಬಾಗಲಕೋಟೆ : ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಕಡಿಮೆಯಾಗುತ್ತಿಲ್ಲ. ಅಪ್ಪು ಸಮಾಧಿ ದರ್ಶನ ಮಾಡಲು ಕಂಠೀರವ ಸ್ಟೇಡಿಯಂಗೆ ಪ್ರತಿದಿನ ಜನ ಸಾಗರವೇ ಹರಿದು ಬರುತ್ತಿದೆ. ಸಮಾಧಿ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ನಡುವೆ ಯುವರತ್ನನ ಅಭಿಮಾನಿಯೊಬ್ಬರು ಸಮಾಧಿ ಭೇಟಿಗೆ ಸೈಕಲ್ ಯಾತ್ರೆ ಮೂಲಕ ಬಾಗಲಕೋಟೆಯಿಂದ ಬರುತ್ತಿದ್ದಾರೆ. ನಿನ್ನೆ (ನ.10) ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ