‘ರಾಧೆ ಶ್ಯಾಮ್’ ಚಿತ್ರದಲ್ಲಿ ನಟ ಸಚಿನ್ ಖೇಡೇಕರ್ ರವರ ಪಾತ್ರವೇನು ಗೊತ್ತಾ?

ಹೈದರಾಬಾದ್| pavithra| Last Modified ಬುಧವಾರ, 7 ಏಪ್ರಿಲ್ 2021 (11:47 IST)
ಹೈದರಾಬಾದ್ : ಬಾಲಿವುಡ್ ನಟ ಸಚಿನ್ ಖೇಡೇಕರ್ ಅವರು ಪ್ರಭಾಸ್ ಮತ್ತು ಪೂಜಾ ಹೆಗ್ಡೆ  ಅವರ  ಮುಂಬರುವ ಚಿತ್ರ ರಾಧೆ ಶ್ಯಾಮ್ ಚಿತ್ರದಲ್ಲಿ  ಪ್ರಮುಖ ಪಾತ್ರವಹಿಸುತ್ತಾರೆಂದು ಬಹಿರಂಗಪಡಿಸಿದರು.

ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಯುರೋಪ್ ನಲ್ಲಿ ನಡೆದಿದ್ದು, ಇದರಲ್ಲಿ ನಟ ಸಚಿನ್ ಖೇಡೇಕರ್ ಭಾಗವಹಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ ಅವರು, ನಾನು ಚಿತ್ರದಲ್ಲಿ ಕಾಲೇಜು ಡೀನ್ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ನಟ ಸಚಿನ್ ಖೇಡೇಕರ್ ಅವರು ಈ ಹಿಂದೆ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ವೈಕುಂಠಪುರರಾಮುಲ್’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಅವರು ಪ್ರಭಾಸ್ –ಪೂಜಾ ಹೆಗ್ಡೆ ಜೊತೆಗೆ ನಟಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :