ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಕ್ಕೆ ಮೊದಲು ಇಟ್ಟ ಹೆಸರೇನು ಗೊತ್ತಾ?

ಹೈದರಾಬಾದ್| pavithra| Last Modified ಶುಕ್ರವಾರ, 4 ಸೆಪ್ಟಂಬರ್ 2020 (10:30 IST)
ಹೈದರಾಬಾದ್ : ನಟ ಪ್ರಭಾಸ್ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಆದಿಪುರುಷ ಸಿನಿಮಾ ಭಾರೀ ಬಜೆಟ್ ನಲ್ಲಿ ಮೂಡಿಬರುತ್ತಿದ್ದು, ಈ ಸಿನಿಮಾಕ್ಕೆ ಆದಿಪುರುಷ ಎಂದು ಹೆಸರಿಡುವ  ಮೊದಲು ಬೇರೆ ಹೆಸರೊಂದನ್ನು ಇಡಲಾಗಿತಂತೆ.

ಹೌದು. ನಟ ಪ್ರಭಾಸ್ ಅವರ ಆದಿಪುರುಷ ಸಿನಿಮಾದ ಟೈಟಲ್ ಪೋಸ್ಟರ್ ಈಗಾಗಲೇ ರಿಲೀಸ್ ಮಾಡಲಾಗಿದೆ. ಆ ಮೂಲಕ ಇದು ಪೌರಾಣಿಕ ಚಿತ್ರವೆಂಬುದಾಗಿ ತಿಳಿದುಬಂದಿದೆ. ಅಲ್ಲದೇ  ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದಾಗಿ ಚಿತ್ರತಂಡ ತಿಳಿಸಿದೆ.

ಆದರೆ ಈ ಚಿತ್ರಕ್ಕೆ ‘ಆದಿಪುರುಷ’ ಎಂದು ಹೆಸರಿಡುವ ಮೊದಲು ‘ಅಯೋಧಿ’ ಎಂದು ಟೈಟಲ್ ಇಡಲಾಗಿತಂತೆ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಇದರಿಂದ ಸಿನಿಮಾಗೆ  ಸಂಕಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ಆ ಹೆಸರನ್ನು ಕೈಬಿಟ್ಟು ಆದಿಪುರುಷ ಎಂದು ಟೈಟಲ್ ನೀಡಲಾಗಿದೆಯಂತೆ.ಇದರಲ್ಲಿ ಇನ್ನಷ್ಟು ಓದಿ :