ಬೆಂಗಳೂರು: 'ಮನಸಾರೆ' ಸಿನಿಮಾದಲ್ಲಿ ಜತೆಯಾಗಿ ನಟಿಸಿದ ದಿಗಂತ್ ಹಾಗೂ ಐಂದ್ರಿತಾ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನು ನಟಿ ಐಂದ್ರಿತಾ ಕೂಡ ನೋಡಿದ್ದಾರೆ. ದಿಗಂತ್ ಸಿನಿಮಾದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.