ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ಎದ್ದಿರುವ ವಿವಾದವನ್ನು ಚಿತ್ರರಂಗದ ಹಿರಿಯರು ಮಾತುಕತೆ ಮೂಲಕ ಪರಿಹರಿಸಲು ಮುಂದಾಗಿದ್ದಾರೆ.ಆದರೆ ನಿನ್ನೆ ರವಿಚಂದ್ರನ್ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ನಡೆದಿರಲಿಲ್ಲ. ಇಂದೂ ಕೂಡಾ ಸುದೀಪ್ ಮತ್ತು ಕುಮಾರ್ ರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯಿಲ್ಲ. ಹಾಗಿದ್ದರೆ ಇಬ್ಬರ ನಡುವೆ ಸಂಧಾನ ಹೇಗೆ?ಮೂಲಗಳ ಪ್ರಕಾರ ಸಂಧಾನ ನಡೆಸಲು ಮುಂದಾಗಿರುವ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ತಮ್ಮದೇ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.