ಚೆನ್ನೈ: ರಜನೀಕಾಂತ್ ಅಭಿನಯದ ಕಾಲಾ ಸಿನಿಮಾ ಜೂನ್ 7 ರಂದು ಬಿಡುಗಡೆಯಾಗಲಿದೆ. ಧನುಷ್ ಪ್ರೊಡಕ್ಷ ನ್ ಹೌಸ್ ಈ ವಿಷಯದ ಕುರಿತು ಮಾಹಿತಿ ದೃಢಪಡಿಸಿದೆ. ಈ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುತ್ತದೆ ಎಂಬ ಸುದ್ದಿ ಸುಳ್ಳು. ನಾವು ಪ್ಲ್ಯಾನ್ ಮಾಡಿರುವಂತೆ ಇದೇ ಜೂನ್ 7 ಕ್ಕೆ ಬಿಡುಗಡೆಯಾಗಲಿದೆ. ಸೂಪರ್ಸ್ಟಾರ್ ರಜನೀಕಾಂತ್ರನ್ನು ಕಾಲಾ ಕರಿಕಾಲನ್ ರೂಪದಲ್ಲಿ ನಿಮಗೆ ತೋರಿಸಲು ನಾವೂ ಕಾತರರಾಗಿದ್ದೇವೆ ಎಂದು ಎಂದು ಪ್ರೊಡಕ್ಷ ನ್ ಹೌಸ್ ಹೇಳಿದೆ.