ಬಾಲಿವುಡ್ ನಿರ್ದೇಶಕನ ಸಂಬಂಧವೇ ಬೇಡ ಎಂದ ಹಾಟ್ ನಟಿ

ಮುಂಬೈ| Jagadeesh| Last Modified ಬುಧವಾರ, 23 ಸೆಪ್ಟಂಬರ್ 2020 (13:15 IST)
ಬಾಲಿವುಡ್ ನಿರ್ದೇಶಕರೊಬ್ಬರ ವಿರುದ್ಧ ನಟಿಯೊಬ್ಬರು #Metoo ಆರೋಪ ಮಾಡಿದ್ದು, ತನ್ನ ಮೇಲೆ ಬಲವಂತವಾಗಿ ಆ ಕೆಲಸ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.

ಈ ನಡುವೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ನಟಿ ತಾಪ್ಸಿ ಪನ್ನು ಬೆಂಬಲಿಸಿದ್ದಾರೆ. ಒಂದು ವೇಳೆ ಅನುರಾಗ್ ಕಶ್ಯಪ್ ತಪ್ಪಿತಸ್ಥನೆಂದು ಸಾಬೀತಾದರೆ, ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳುವುದಾಗಿ ಹೇಳಿದ್ದಾರೆ.

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರೊಂದಿಗೆ ನಿಕಟ ಬಾಂಧವ್ಯದ ಫೋಟೋ ಹಂಚಿಕೊಂಡಿದ್ದಾರೆ ತಾಪ್ಸೀ ಪನ್ನು.

ನಟಿ ಪಾಯಲ್ ಘೋಷ್ ತನಗೆ ಅನುರಾಗ್ ಕಶ್ಯಪ್ ಆ ಥರದ ಕಿರುಕುಳ ಬಲವಂತವಾಗಿ ನೀಡಿದ್ದಾರೆ ಎಂದು ಕೇಸ್ ಹಾಕಿದ್ದಾರೆ.

ಈ ನಡುವೆ ಪಾಯಲ್ ಘೋಷ್ ಮಾಡಿರುವ ಆರೋಪ ಕುರಿತು ತನಿಖೆ ನಡೆದು ಸತ್ಯ ಹೊರಬರಲಿ ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :