Photo Courtesy: Twitterಬೆಂಗಳೂರು: ಕಾಂತಾರ ಸಿನಿಮಾದಲ್ಲಿ ನಾಯಕ ಶಿವನ ಸ್ನೇಹಿತ ‘ರಾಂಪ’ನಾಗಿ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡ್ ಈಗ ಕನ್ನಡ ಜನಪ್ರಿಯ ಹಾಸ್ಯ ಕಲಾವಿದರಾಗುತ್ತಿದ್ದಾರೆ.ಕಾಸರಗೋಡು ಸಿನಿಮಾದಲ್ಲಿ ಭುಜಂಗನ ಪಾತ್ರ ಮಾಡಿ ಪಾಪ್ಯುಲರ್ ಆಗಿದ್ದ ಪ್ರಕಾಶ್ ತುಮಿನಾಡ್ ಮೂಲತಃ ಗಡಿನಾಡು ಮಂಜೇಶ್ವರದವರು. ರಂಗಭೂಮಿ ಕಲಾವಿದರಾಗಿದ್ದ ಪ್ರಕಾಶ್ ತುಮಿನಾಡ್ ರಂಗಭೂಮಿಯಲ್ಲಿದ್ದಾಗ ನಟನೆ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು.ಒಂದು ಮೊಟ್ಟೆಯ ಕತೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಪ್ರಕಾಶ್ ತುಮಿನಾಡ್ ಇದುವರೆಗೆ ಒಂಭತ್ತು ಸಿನಿಮಾದಲ್ಲಿ