ಬೆಂಗಳೂರು : ಕನ್ನಡದ ‘ಅಪ್ಪು’ ಚಿತ್ರದ ಮೂಲಕ ನಾಯಕನಟರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನ್ನಡದ ಹಲವು ಸೂಪರ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರ ಜೊತೆ ನಟಿಸಬೇಕೆಂದು ಹಲವು ಸಿನಿಮಾ ತಾರೆಯರು ಹಾತೊರೆಯುತ್ತಿದ್ದಾರೆ. ಅದೇರೀತಿ ಇದೀಗ ತಮಿಳು ನಟರೊಬ್ಬರು ಕೂಡ ಪುನೀತ್ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.