ಚೆನ್ನೈ : ಕಾಲಿವುಡ್ ನಟ ವಿಶಾಲ್ ಅಭಿನಯದ, ಎಂ.ಎಸ್.ಆನಂದನ್ ನಿರ್ದೇಶನದ ಚಿತ್ರ ‘ಚಕ್ರ’ ಫೆಬ್ರವರಿ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹಾಗೇ ಈ ಚಿತ್ರ ತೆಲುಗಿನಲ್ಲಿಯೂ ಕೂಡ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಪ್ರಸ್ತುತ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಟ ವಿಶಾಲ್ ಇದೀಗ ತೆಲುಗು ಪ್ರೇಕ್ಷಕರ ಬಗ್ಗೆ ಹಾಗೂ ಪೈರಸಿಯ ಬಗ್ಗೆ ಆಸಕ್ತಿದಾಯಕವಾದ ಕಾಮೆಂಟ್ ವೊಂದನ್ನು ಮಾಡಿದ್ದಾರೆ.