ಬೆಂಗಳೂರು : ಆಸ್ತಿ ತೆರಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ. ಹೌದು. ದರ್ಶನ್ ಅವರು ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದ 2017-18 ನೇ ಸಾಲಿನ ಆಸ್ತಿ ತೆರಿಗೆಯನ್ನು ಕಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಬಿಬಿಎಂಪಿ 100 ರೂ.ದಂಡ ಹಾಗೂ 2,164 ರೂ. ಬಡ್ಡಿ ವಿಧಿಸಿದೆ. ದರ್ಶನ್ ಅವರು 2017-18, 2018-19 ಸಾಲಿನಲ್ಲಿ ಒಟ್ಟು 12,024 ರೂ. ತೆರಿಗೆಕಟ್ಟಬೇಕಿತ್ತು.