ಚಿತ್ರ ನಿರ್ಮಿಸಲು ಮುಂದಾದ ನಟಿ ದೀಪಿಕಾ ಕೊನೆಗೆ ಕೈಬಿಟ್ಟಿದ್ಯಾಕೆ?

ಮುಂಬೈ| pavithra| Last Modified ಗುರುವಾರ, 21 ಜನವರಿ 2021 (12:45 IST)
ಮುಂಬೈ : ದೀಪಿಕಾ ಪಡುಕೋಣೆ ಬಾಲಿವುಡ್ ನ ಟಾಪ್ ನಟಿ. ಸೌಂದರ್ಯದಲ್ಲಿಯೂ ಅಗ್ರಸ್ಥಾನದಲ್ಲಿರುವ ನಟಿ ತಮ್ಮ ಅಮೋಘವಾದ  ನಟನೆಯ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಈ ನಡುವೆ ನಟಿ ದೀಪಿಕಾ ಪಡುಕೋಣೆ ನಿರ್ಮಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಮಧು ಮಂಥೇನಾ ಅವರೊಂದಿಗೆ ಕೈಜೋಡಿಸಿದ್ದರು, ಇಬ್ಬರು ಸೇರಿ ಕಥೆಯನ್ನು ಅಂತಿಮಗೊಳಿಸಿದ್ದರು. ಮಹಾಭಾರತದ ಮುಖ್ಯ ಘಟನೆಯನ್ನು ಚಿತ್ರವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು.  ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದರು.

ಆದರೆ ಈ ಚಿತ್ರವನ್ನು ನಿರ್ದೇಶಿಸಲು ನಿರ್ದೇಶಕರು ಸಿಗದ ಕಾರಣ ಈ ಚಿತ್ರವನ್ನು ದೀಪಿಕಾ, ಮಧು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಅನೇಕ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಲು ಬಯಸಿದ್ದರೂ ಕೂಡ ಬೇರೆ ಪ್ರಾಜೆಕ್ಟ್ ಇರುವುದರಿಂದ ಸಾಧ್ಯವಾಗಲಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :