ಬೆಂಗಳೂರು: ಸದಾ ನಿಮ್ಮೊಂದಿಗೆ ಎಂಬ ಸಂಚಿಕೆಯಲ್ಲಿ ಸಿನಿ ತಾರೆಯರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುಚ ಕೆಲಸ ಮಾಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಸೃಜನ್ ಲೋಕೇಶ್ ಬೇಲ್ಪೂರಿ, ಪಾನಿಪೂರಿ, ಮಸಾಲ ಪೂರಿ ಮಾರಿ ಒಂದು ಕುಟುಂಬಕ್ಕೆ ಆಸರೆಯಾಗಿದ್ದರು. ಈಗ ಧನಂಜಯ್ ಅವರು ಮೂಸಂಬಿ ಜ್ಯೂಸ್ ಮಾರುವ ಮೂಲಕ ಒಂದು ಕುಟುಂಬಕ್ಕೆ ಆಧಾರವಾಗಿದ್ದಾರೆ. ದೋಣಿ ಹತ್ತಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಸ್ಟ್ರೋಕ್ನಿಂದಾಗಿ ಬಲಗೈ ಸ್ವಾಧೀನ ಕಳೆದುಕೊಂಡಿರುವುದರಿಂದ ತನ್ನ ಕುಟುಂಬ