Widgets Magazine

ಶಿವರಾಜ್ ಕುಮಾರ್ ನನ್ನ ಹಿಂದಿನ ಜನ್ಮದ ಸಹೋದರ ಎಂದು ನಟ ಜಗ್ಗೇಶ್ ಹೇಳಿದ್ದು ಯಾಕೆ?

ಬೆಂಗಳೂರು| pavithra| Last Modified ಶನಿವಾರ, 14 ಜುಲೈ 2018 (06:48 IST)
ಬೆಂಗಳೂರು : ಕನ್ನಡದ ಖ್ಯಾತ ನಟರೊಬ್ಬರು ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ನನ್ನ ಹಿಂದಿನ ಜನ್ಮದ ಸಹೋದರ ಎಂದು
ಹೇಳಿದ್ದಾರೆ.ಹೀಗೆ ಹೇಳಿದ್ದು ಬೇರೆ ಯಾರು ಅಲ್ಲ. ನವರಸನಾಯಕ ಜಗ್ಗೇಶ್ ಅವರು. ಅವರು ಈ ರೀತಿ ಹೇಳಿರುವುದಕ್ಕೆ ಕಾರಣವಿಷ್ಟೇ. ಅದೇನೆಂದರೆ ನಟ ಶಿವರಾಜ್ ಕುಮಾರ್ ಅವರು ಜುಲೈ 12ರಂದು ತಮ್ಮ
ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ಅವರು ಅಭಿನಯಿಸಲಿರೋ ಹಲವು ಸಿನಿಮಾಗಳ ಪೋಸ್ಟರ್ ಗಳನ್ನು ಕೂಡ ಬಿಡುಗಡೆಗೊಳಿಸಲಾಗಿತ್ತು. ಇವುಗಳಲ್ಲಿ ರುಸ್ತುಂ ಹಾಗೂ ಧ್ರೋಣ ಕೂಡ ಒಂದು.

ಆದರೆ ರುಸ್ತುಂ ಹಾಗೂ ಧ್ರೋಣ ಟೈಟಲ್ ಇರುವ ಸಿನಿಮಾಗಳು ಈ ಹಿಂದೆಯೇ ರಿಲೀಸ್ ಆಗಿತ್ತು. ಈ ಎರಡು ಟೈಟಲ್ ನ ಸಿನಿಮಾಗಳಿಗೂ ನವರಸನಾಯಕ ಜಗ್ಗೇಶ್ ಅವರೇ ಹೀರೋ ಆಗಿದ್ದರು. ಈ ಬಗ್ಗೆ ಅಭಿಮಾನಿಯೊಬ್ಬ ಜಗ್ಗೇಶ್ ಅವರಿಗೆ ,’ಜಗ್ಗೇಶ್ ಸಾರ್ , ನಾನು ನಿಮ್ಮ ಅಭಿಮಾನಿ , ನಿಮ್ಮ ಚಿತ್ರಗಳಾದ ರುಸ್ತುಂ , ದ್ರೋಣ , ಈ ಚಿತ್ರದ ಹೆಸರುಗಳು ಶಿವರಾಜ್ ಕುಮಾರ್ ರವರ ಹೊಸ ಚಿತ್ರಗಳ ಹೆಸರಾಗಿವೆ , ಇದಕ್ಕೆ ನೀವೇನಂತಿರಾ ..? ಅಂತ ಕೇಳಿದ್ದಾರೆ.


ಇದಕ್ಕೆ ಜಗ್ಗೇಶ್ ಅವರು ‘ಇದಕ್ಕಿಂತ ಆನಂದ ಬೇರೇನಿದೆ .. ಶಿವ ನನ್ನ ಹಿಂದಿನ ಜನ್ಮದ ಸಹೋದರನಂತೆ , ಅವರ ತಂದೆ ನನ್ನ ಬದುಕಿಗೆ ದ್ರೋಣಾಚಾರ್ಯರಂತೆ .. ಅವರ ವಂಶದ ಎಲ್ಲಾ ಕಾರ್ಯಕ್ಕೂ ನನ್ನ ಹೃದಯದಿಂದ ಶುಭ ಹಾರೈಸುವೆ .. ನೂರ್ಕಾಲ ಸುಖವಾಗಿ ಬಾಳಲಿ ರಾಜವಂಶ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :