ಬೆಂಗಳೂರು : ಶನಿವಾರ ಬೆಂಗಳೂರಿನ ಊರ್ವಶಿ ಚಿತ್ರಮಂದಿರವನ್ನು ಜನರು ಆಕ್ರೋಶದಿಂದ ಮುತ್ತಿಗೆ ಹಾಕಿದ ಘಟನೆಯೊಂದು ಸಂಭವಿಸಿದೆ. ಇದಕ್ಕೆ ಕಾರಣವೆನೆಂದರೆ ಈ ಚಿತ್ರಮಂದಿರದವರು ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಕಾಲಾ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಲಾ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ ಊರ್ವಶಿ ಚಿತ್ರಮಂದಿರ ಜ್ಯುರಾಸಿಕ್ ವರ್ಲ್ಡ್ ಸಿನಿಮಾವನ್ನು ಹಾಕಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಕೂಡ ಥಿಯೇಟರ್ ನ ಮುಂದೆ ಹಾಕಲಾಗಿತ್ತು.