ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಆಶಿತಾ ಅವರು ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾದ ಪೋಸ್ಟರ್ ಹಾಕಿಕೊಂಡಿರುವುದರಿಂದ ಕನ್ನಡ ಸಿನಿಮಾ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಶಿತಾ ಅವರು ತೆಲುಗು ನಟ ಪವನ್ ಕಲ್ಯಾಣ ಅಭಿನಯದ ಅಜ್ಞಾತವಾಸಿ ಸಿನಿಮಾದ ಪೋಸ್ಟರ್ ಹಾಕಿಕೊಂಡು ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಕಾಯುವುದಕ್ಕೆ ಆಗ್ತಿಲ್ಲ ಎಂದು ಸ್ಟೇಟಸ್ ಬರೆದುಕೊಂಡಿದ್ದಾರೆ. ಇದರಿಂದ ಆಶಿತಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.