Widgets Magazine

40 ವರ್ಷಗಳ ಸಿನಿಮಾ ಜೀವನದಲ್ಲಿ ರಜನೀಕಾಂತ ಭಾಗ್ಯರಾಜ್ ಚಿತ್ರದಲ್ಲಿ ಯಾಕೆ ನಟಿಸಲಿಲ್ಲ ಗೊತ್ತಾ?

ಚೆನ್ನೈ| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (11:48 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ 40 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ನಂಬರ್ ಒನ್ ನಟ ಎನಿಸಿಕೊಂಡಿದ್ದು, ಈಗಲೂ ಕೂಡ ಪ್ರಮುಖ ನಟರೊಂದಿಗೆ ಸರಿಸಮಾನವಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಅದೇರೀತಿ ತಮಿಳು ಚಿತ್ರರಂಗದಲ್ಲಿ 80 ಮತ್ತು 90ರ ದಶಕಗಳಲ್ಲಿ ಕ್ರಾಂತಿಯುಂಟು ಮಾಡಿದವರು ಭಾಗ್ಯರಾಜ್ ಅವರು. ಅವರು  ಬರಹಗಾರರಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರೂ ನಂತರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ ಇಂತಹ ಖ್ಯಾತ ನಿರ್ದೇಶಕರ ಚಿತ್ರದಲ್ಲಿ ಖ್ಯಾತ ನಟ ರಜನೀಕಾಂತ್ ಇಲ್ಲಿಯವರೆಗೆ ಯಾಕೆ ನಟಿಸಲಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು.

ಇದಕ್ಕೆ ಕಾರಣವೇನೆಂದರೆ ನಿರ್ದೇಶಕ ಮುತ್ತುರಾಮನ್. ಹೌದು, ಮುತ್ತುರಾಮನ್ ಅವರ ಚಿತ್ರದಲ್ಲಿ ನಟಿಸುತ್ತಿದ್ದ ರಜನೀಕಾಂತ್ ಅವರಿಗೆ ಯಶಸ್ಸು ಸಿಗುತ್ತಿದ್ದರಿಂದ ಬೇರೆ ನಿರ್ದೇಶಕರನ್ನು ಹುಡುಕಲಿಲ್ಲ ಎನ್ನಲಾಗಿದೆ. ಬಹುಶಃ  ಮುತ್ತುರಾಮನ್ ಕೆಲವು ಚಿತ್ರಗಳು ವಿಫಲವಾಗಿದ್ದರೆ ರಜನೀಕಾಂತ್ ಬೇರೆ ನಿರ್ದೇಶಕರ ಚಿತ್ರ ಹುಡುಕಿಕೊಂಡು ಹೋಗುತ್ತಿದ್ದರು. ಆಗ ಭಾಗ್ಯರಾಜ್ ಚಿತ್ರದಲ್ಲಿಯೂ ನಟಿಸಲು ಅವಕಾಶ ಸಿಗುತ್ತಿತ್ತು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :