ಬೆಂಗಳೂರು: ಸದಾ ಬಲಪಂಥೀಯ ವಿರೋಧಿ ಹೇಳಿಕೆಗಳಿಂದಲೇ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಪ್ರಕಾಶ್ ರೈ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಕೂಡಾ ಹೊಗಳಿದ್ದಾರೆ. ಪ್ರಕಾಶ್ ರೈ ಬರೆದ ಇರುವುದೆಲ್ಲವ ಬಿಟ್ಟು.. ಎಂಬ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಶುಭ ಹಾರೈಸಿರುವ ಕಿಚ್ಚ, ಬಹುಭಾಷಾ ತಾರೆಗೆ ಹೊಸದೊಂದು ಬಿರುದನ್ನೂ ಕೊಟ್ಟಿದ್ದಾರೆ.ಪ್ರಕಾಶ್ ರೈ ನಡೆದಾಡುವ ಹಾರ್ಡ್ ಡಿಸ್ಕ್ ಎಂದು ಕಿಚ್ಚ ಸುದೀಪ್ ಕೊಂಡಾಡಿದ್ದಾರೆ.