ಸ್ಯಾಂಡಲ್ವುಡ್ನಲ್ಲಿ ಟಾಪ್ ನಟಿಯಾಗಿ ಮೆರೆದ ಗೋಲ್ಡನ್ ಕ್ವೀನ್ ರಮ್ಯಾ ಇದೀಗ ಚಿತ್ರರಂಗ ಹಾಗೂ ರಾಜಕೀಯ.. ಎರಡರಿಂದಲೂ ದೂರ ಸರಿದಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗುವ ರಮ್ಯಾ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮಹಿಳೆಯರ ಪರವಾಗಿ ದನಿಯೆತ್ತಿದ್ದಾರೆ. ಪ್ರತಿ ಬಾರಿ ಮಹಿಳೆಯರೇ ಏಕೆ ಆಪಾದನೆಯನ್ನು ಹೊತ್ತುಕೊಳ್ಳಬೇಕು? ಮಹಿಳೆಯರೇ ಯಾಕೆ ಎಲ್ಲಾದರಲ್ಲೂ ಕಾಂಪ್ರೊಮೈಸ್ ಆಗಬೇಕು? ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ. ನಟಿ ರಮ್ಯಾ