ಬೆಂಗಳೂರು: ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿರುವ ಹೊಸ ಹವಾ ನೋಡಿ ಭಾರತೀಯ ಚಿತ್ರರಂಗವೇ ಒಮ್ಮೆ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಆದರೆ ಯಾವ ಕಾರಣಕ್ಕೆ ಕೆಜಿಎಫ್ ನೋಡಬೇಕು ಎಂಬುದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಕೊಡಬಹುದು.ಫೈಟಿಂಗ್ ಬೋರ್ ಹೊಡೆಸಲ್ಲ ಸಾಮಾನ್ಯವಾಗಿ ಈ ಚಿತ್ರದ ಟ್ರೇಲರ್ ನೋಡಿದವರು ಇದು ಪಕ್ಕಾ ರಕ್ತ ಸಿಕ್ತ ಸಿನಿಮಾ ಎಂದುಕೊಂಡಿರುತ್ತಾರೆ. ಆದರೆ ಇಲ್ಲಿ ಫೈಟಿಂಗ್ ಇದ್ದರೂ ಅತಿರೇಕವೆನಿಸುವ ದೃಶ್ಯಗಳಿಲ್ಲ. ಹೊಡೆದಾಡುವ ಸನ್ನಿವೇಶಗಳನ್ನು ಆದಷ್ಟು ಸಹಜವಾಗಿ ತೋರಿಸಲಾಗಿದೆ.