ಮನುಷ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಇದು ಹೆಸರೇ ಸೂಚಿಸುವಂತೆ ಇದು ಹತ್ತೊಂಬತ್ತನೇ ವಯಸ್ಸಿನ ಹುಮ್ಮಸ್ಸು, ನಿರ್ಧಾರ ಮತ್ತು ಅದರಿಂದಾಗೋ ಪರಿಣಾಮಗಳ ಸುತ್ತ ಹೊಸೆದಿರೋ ಕಥೆಯನ್ನೊಳಗೊಂಡಿರುವ ಚಿತ್ರ. ಆದರೆ ಅದರ ಜೊತೆ ಜೊತೇ ಗಂಭೀರವಾದ, ಎಲ್ಲರನ್ನೂ ಚಿಂತನೆಗೆ ಹಚ್ಚುವ, ಸಂದೇಶ ಸಾರುವ ಕಥನವೂ ಇಲ್ಲಿದೆ. ಒಟ್ಟಾರೆ ಚಿತ್ರ ರಸವತ್ತಾಗಿ