ಪದ್ಮಾವತಿ ಚಿತ್ರದಲ್ಲಿ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ಸತ್ಯವನ್ನು ವಿರೂಪಗೊಳಿಸಿ ನಿರ್ಮಿಸಿದ್ದು. ಚಿತ್ರವನ್ನು ಪ್ರದರ್ಶಿಸುವ ಥಿಯೇಟರ್ಗಳನ್ನು ಸುಟ್ಟುಹಾಕುತ್ತೇವೆ ಎಂದು ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಬೆದರಿಕೆಯೊಡ್ಡಿದ್ದಾರೆ. ಇದು ರಾಜ್ಪೂತ್ ಸಮುದಾಯದ ಗೌರವದ ಪ್ರಶ್ನೆ. ನಂತರ ಏನಾಗುತ್ತದೆಯೋ ಕಾದು ನೋಡುತ್ತೇವೆ ಎಂದು ರಾಜಸ್ಥಾನ್ ರಾಜಪೂತ್ ಸಮುದಾಯ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಪದ್ಮಾವತಿ ಚಿತ್ರದಲ್ಲಿ ರಾಜಪೂತ್ ಸಮುದಾಯದ ಗೌರವಕ್ಕೆ ಧಕ್ಕೆ ತರುವ ದೃಶ್ಯಗಳಿದ್ದಲ್ಲಿ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ.