ಚೆನ್ನೈ: ಇತ್ತೀಚೆಗಷ್ಟೇ ದಾಂಪತ್ಯ ಜೀವನ ಮುರಿದುಕೊಂಡಿದ್ದ ಟಾಲಿವುಡ್ ಜೋಡಿ ಧನುಷ್, ಐಶ್ವರ್ಯಾ ರಜನೀಕಾಂತ್ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದಾರೆಯೇ?ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಧನುಷ್, ಐಶ್ವರ್ಯಾಗೆ ಲಿಂಗ ಮತ್ತು ಯಾತ್ರ ಎನ್ನುವ ಇಬ್ಬರು ಪುತ್ರರಿದ್ದಾರೆ. ಈ ಮಕ್ಕಳಿಗಾಗಿ ಧನುಷ್, ಐಶ್ವರ್ಯಾ ಜೊತೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.ಕೆಲವು ದಿನಗಳ ಹಿಂದೆ ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಭಾಗಿಯಾಗಿದ್ದರು. ಈಗ ಎರಡೂ ಕುಟುಂಬಸ್ಥರು ಈ ಜೋಡಿಯನ್ನು ಒಂದು ಮಾಡಲು