ಬೆಂಗಳೂರು: ಕತೆ ಚೆನ್ನಾಗಿದ್ದರೆ ಹೊಸಬರ ಸಿನಿಮಾಗಳೂ ಗೆಲ್ಲುತ್ತವೆ ಎಂಬುದು ಸ್ಯಾಂಡಲ್ ವುಡ್ ನಲ್ಲಿ ಅನೇಕ ಬಾರಿ ಪ್ರೂವ್ ಆಗಿದೆ. ಆ ಸಾಲಿಗೆ ಈಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕೂಡಾ ಸೇರ್ಪಡೆಯಾಗುತ್ತಿದೆ.ಈ ಸಿನಿಮಾ ಬಿಡುಗಡೆಗೂ ಮೊದಲೇ ಸದ್ದು ಮಾಡಿತ್ತು. ಪ್ರಮುಖ ಪಾತ್ರದಲ್ಲಿ ಯಾವುದೇ ಸ್ಟಾರ್ ನಟರಿಲ್ಲದಿದ್ದರೂ ಹೊಸ ತಂಡ ಮೊದಲ ಪ್ರಯತ್ನಲ್ಲೇ ಗೆದ್ದಿದೆ. ಯೂಥ್ ಫುಲ್ ಸ್ಟೋರಿ ಇಟ್ಟುಕೊಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದೆ.ಇದೀಗ ಗಳಿಕೆ ವಿಚಾರದಲ್ಲೂ ಭಾರೀ ಮುಂದಿದೆ.