ಹೈದರಾಬಾದ್ : ಮೆಗಾಸ್ಟರ್ ಚಿರಂಜೀವಿ ಅವರು ಆಚಾರ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಇದೀಗ ನಟ ಮೋಹನ್ ಬಾಬು ಆಚಾರ್ಯ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಇದಕ್ಕೆ ಕಾರಣವೇನೆಂದರೆ ಇತ್ತೀಚೆಗೆ ಮೋಹನ್ ಬಾಬು ಅವರು ತಮ್ಮ ದೀರ್ಘಕಾಲದ ಸ್ನೇಹಿತ ಚಿರಂಜೀವಿ ಅವರನ್ನು ಆಚಾರ್ಯ ಸೆಟ್ ನಲ್ಲಿ ಭೇಟಿಯಾಗಿದ್ದಾರೆ. ಹಾಗಾಗಿ ಮೋಹನ್ ಬಾಬು ಆಚಾರ್ಯ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮೋಹನ