ಮುಂಬೈ: ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೇ ಇದೀಗ ಚಿತ್ರರಂಗ, ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ರಶ್ಮಿಕಾರ ಡೀಪ್ ಫೇಕ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದರಲ್ಲಿ ರಶ್ಮಿಕಾರನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಈ ವಿಡಿಯೋ ನೋಡಿ ಸ್ವತಃ ರಶ್ಮಿಕಾ ಶಾಕ್ ಗೊಳಗಾಗಿರುವುದಾಗಿ ಹೇಳಿದ್ದಾರೆ.ಈ ವಿಡಿಯೋ ಮೊದಲು ಬ್ರಿಟಿಷ್ ಇಂಡಿಯನ್ ಝರಾ ಪಟೇಲ್ ಎಂಬವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಕ್ಟೋಬರ್ 9 ರಂದು ಮೊದಲ