ಬೆಂಗಳೂರು: ನಟಿ ಶೀತಲ್ ಶೆಟ್ಟಿ ವಿಂಡೋ ಸೀಟ್ ಮೂಲಕ ಸ್ಯಾಂಡಲ್ ವುಡ್ಗೆ ಡೈರೆಕ್ಟರ್ ಆಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ನಿರೂಪ್ ಬಂಡಾರಿ, ಅಮೃತ ಅಯ್ಯರ್ ಮತ್ತು ಸಂಜನಾ ಆನಂದ್ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಶೀತಲ್ ಶೆಟ್ಟಿ. ಇದೀಗ ಸಿನಿಮಾದ ಬಗ್ಗೆ ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕೆಲಸ ಮಾಡುತ್ತಿರುವ ವಿಡಿಯೋವೊಂದನ್ನು ಶೀತಲ್