ಬೆಂಗಳೂರು: ದೇಶದಾದ್ಯಂತ ಈಗ ಕೆಜಿಎಫ್ ಸಿನಿಮಾದ್ದೇ ಸದ್ದು. ಚಿತ್ರ ನೋಡಿದ ಅಭಿಮಾನಿಗಳ ಜತೆ ಗಣ್ಯರೂ ರಾಕಿಂಗ್ ಸ್ಟಾರ್ ಯಶ್ ಗೆ ಶುಭಾಷಯ ಹೇಳುತ್ತಿದ್ದಾರೆ.ಇದೀಗ ಮೈಸೂರು ರಾಜ ಯದುವೀರ್ ಒಡೆಯರ್ ಕೂಡಾ ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಬಗ್ಗೆ ಯಶ್ ಗೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.ಕೆಜಿಎಫ್ ನೋಡಿದೆ. ಚೆನ್ನಾಗಿತ್ತು. ನಿಮಗೆ ಆಲ್ ದಿ ಬೆಸ್ಟ್ ಎಂದು ಯದುವೀರ್ ಒಡೆಯರ್ ಟ್ವೀಟ್ ಮೂಲಕ ಯಶ್ ಗೆ ಶುಭ ಹಾರೈಸಿದ್ದಾರೆ.