ಯಜ್ಞಾ ಶೆಟ್ಟಿ ಮದುವೆಯಲ್ಲಿ ರಿಷಬ್, ರಕ್ಷಿತ್ ಶೆಟ್ಟಿ ಮಿಂಚಿಂಗ್

ಬೆಂಗಳೂರು| Krishnaveni K| Last Modified ಬುಧವಾರ, 30 ಅಕ್ಟೋಬರ್ 2019 (17:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಕರಾವಳಿ ಹುಡುಗಿ ಯಜ್ಞಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂದೀಪ್ ಶೆಟ್ಟಿ ಜತೆ ಯಜ್ಞಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 
ಕುಟುಂಬಸ್ಥರು, ಸ್ನೇಹಿತರು, ಆಪ್ತರ ಸಮ್ಮುಖದಲ್ಲಿ ಈ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಯಜ್ಞಾ ಸಿನಿ ಸ್ನೇಹಿತರಾದ ರಿಷಬ್ ಶೆಟ್ಟಿ ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ.
 
ಮದುವೆಗೆ ರಿಷಬ್ ಶೆಟ್ಟಿ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತಿತರ ಸಿನಿ ಸ್ನೇಹಿತರು ಆಗಮಿಸಿದ್ದರು. ಮಂಗಳೂರು ಮೂಲದವರಾದ ಯಜ್ಞಾ ಬಂಟರ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :