ಬೆಂಗಳೂರು: ಕೆಜಿಎಫ್ ಸಿನಿಮಾ ನೋಡಿ ಪ್ರಭಾವಿತನಾದ ವಿದೇಶೀ ಪ್ರಜೆಯೊಬ್ಬನಿಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.ಕೆಜಿಎಫ್ ಸಿನಿಮಾ ನೋಡಿ ಟ್ವೀಟ್ ಮಾಡಿದ್ದ ಲಂಡನ್ ಮೂಲದ ಟೀಚರ್ ಪಾಲ್ ಎಂಬವರು ರ್ಯಾಪ್ ಹಾಡು ಮಾಡಿದ್ದರು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಮೆಚ್ಚಿದ್ದರು.ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡಾ ಈತನ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ನಾನು ನೋಡಿದ ಮೊದಲ ಭಾರತೀಯ ಸಿನಿಮಾ ಕೆಜಿಎಫ್. ಇದನ್ನು ನೋಡಿ ಪ್ರಭಾವಿತನಾಗಿ ಈ ರ್ಯಾಪ್ ಹಾಡು ಬರೆದಿದ್ದೇನೆ