ಬೆಂಗಳೂರು: ಕನ್ನಡದ ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಸಿನಿಮಾ ಶೈಲಿಯಲ್ಲಿ ಸವಾಲು ಹಾಕಿದ್ದಾರೆ. ಕಾವೇರಿ ಹೋರಾಟ ವಿಷಯದಲ್ಲಿ ತನ್ನ ನೈತಿಕತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಚಾಟಿ ಬೀಸಿದ್ದಾರೆ.ಹಿನ್ನೆಲೆಯಿಷ್ಟೇ. ಇತ್ತೀಚೆಗೆ ಕಾವೇರಿ ಹೋರಾಟದ ವಿಷಯದಲ್ಲಿ ಕಲಾವಿದರ ಜವಾಬ್ದಾರಿ ಕುರಿತು ನಟ ಯಶ್ ಅವರಲ್ಲಿ ಪ್ರಶ್ನಿಸಿದಾಗ, ಕೇವಲ ರೈತರ ಪರ ಚರ್ಚೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ರೈತರ ಕಾಳಜಿ ವಹಿಸಿದಂತಲ್ಲ ಎಂಬಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು