ಯಶ್ ರನ್ನು ಕಡೆಗಣಿಸಿದ್ರಾ ಪ್ರಭಾಸ್? ಫ್ಯಾನ್ಸ್ ಗರಂ

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (10:03 IST)
ಬೆಂಗಳೂರು: ಸಲಾರ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆದರೆ ಮುಹೂರ್ತ ಕಾರ್ಯಕ್ರಮದ ಬಗ್ಗೆ ಪ್ರಭಾಸ್ ಮಾಡಿರುವ ಫೇಸ್ ಬುಕ್ ಪೋಸ್ಟ್ ಒಂದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 
ಪ್ರಭಾಸ್ ಸಲಾರ್ ಮುಹೂರ್ತದ ಕ್ಷಣಗಳ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು. ಆದರೆ ಈ ಫೋಟೋಗಳಲ್ಲಿ ಎಲ್ಲೂ ಯಶ್ ಜೊತೆಗಿರುವ ಫೋಟೋ ಪ್ರಕಟಿಸಿಲ್ಲ. ಇದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಬಾಹುಬಲಿ ಸಿನಿಮಾ ಬಳಿಕ ಯಾವುದೇ ಸಿನಿಮಾ ಗೆಲ್ಲದೇ ಹೋದಾಗ ಕೈ ಕೊಟ್ಟಿದ್ದೇ ಯಶ್. ಈಗ ಪರೋಕ್ಷವಾಗಿ ಅವರ ಕಾರಣದಿಂದಲೇ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀರಿ. ಹಾಗಿದ್ದರೂ ಅವರ ಜೊತೆಗಿರುವ ಫೋಟೋ ಯಾಕೆ ಪ್ರಕಟಿಸಿಲ್ಲ ಎಂದು ಹಲವರು ಪ್ರಭಾಸ್ ರನ್ನು ಪ್ರಶ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :