ಬೆಂಗಳೂರು: ಎಲ್ಲವೂ ಅಂದುಕೊಡಂತೇ ನಡೆದಿದ್ದರೆ ಇಂದು ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಹಾಗಂತ ಕೆಜಿಎಫ್ ಚಿತ್ರತಂಡ ಹಾಗೂ ಯಶ್ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ರಾಕಿ ಬಾಯ್ ಹುಟ್ಟುಹಬ್ಬದ ಸಲುವಾಗಿ ಇಂದು ಕೆಜಿಎಫ್ 2 ಎರಡನೇ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಅದರ ಜತೆಗೆ ನಿನ್ನೆ ಮಧ್ಯರಾತ್ರಿ ಬೃಹತ್ ಕೇಕ್ ಕಟ್ ಮಾಡಿದ ಯಶ್ ಅಭಿಮಾನಿಗಳ ಮುಂದೆ ಕೆಜಿಎಫ್ 2 ಸಿನಿಮಾದ ಖಡಕ್ ಡೈಲಾಗ್ ಒಂದನ್ನು ಹೇಳಿ ಮನರಂಜಿಸಿದ್ದಾರೆ.