ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಎಂದು ಘೋಷಣೆ ಮಾಡಿದ್ದಾರೆ.ಆದರೆ ಅದಕ್ಕಿಂತ ಮೊದಲು ಯಶ್ ಬಾಲಿವುಡ್ ಸಿನಿಮಾವೊಂದರಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಲಿರುವ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು.ಈ ಸಿನಿಮಾ ಮುಂದಿನ ವರ್ಷ ಬೇಸಿಗೆಯಲ್ಲಿ ಸೆಟ್ಟೇರಲಿದೆ. ಹೀಗಾಗಿ ಯಶ್ ಏಕಕಾಲಕ್ಕೆ ಈ ಸಿನಿಮಾ ಮತ್ತು ತಮ್ಮ ಟಾಕ್ಸಿಕ್ ಸಿನಿಮಾ ಚಿತ್ರೀಕರಣದಲ್ಲಿ