Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಇಂದಿನ ಈ ದಿನಕ್ಕಾಗಿ ಅದು ಎಷ್ಟು ದಿನದಿಂದ ಕಾಯುತ್ತಿದ್ದಾರೆ. ಕೊನೆಗೂ ಯಶ್19 ಘೋಷಣೆ ದಿನ ಬಂದೇ ಬಿಟ್ಟಿದೆ.ಇಂದು ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆಯಾಗಲಿದೆ. ಬೆಳಿಗ್ಗೆ 9.55 ಕ್ಕೆ ಟೈಟಲ್ ಘೋಷಣೆ ಮಾಡುವುದಾಗಿ ಯಶ್ ಈಗಾಗಲೇ ಪ್ರಕಟಿಸಿದ್ದಾರೆ.ಕೆಜಿಎಫ್ 2 ಬಳಿಕ ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಸಾಕಷ್ಟು ಹೋಂ ವರ್ಕ್ ಮಾಡಿಕೊಂಡು ಯಶ್ ಹೊಸ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ.