ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಈಗ ಒಂದೊಂದೇ ಅಪ್ ಡೇಟ್ ಸಿಗುತ್ತಿದೆ. ಡಿಸೆಂಬರ್ 8 ಕ್ಕೆ ಟೈಟಲ್ ರಿವೀಲ್ ಮಾಡುವುದಾಗಿ ಯಶ್ ಘೋಷಿಸಿದ್ದಾರೆ.ರಾಕಿಭಾಯಿ ಯಶ್ ನಿನ್ನೆಯಷ್ಟೇ ತಮ್ಮ ಇನ್ ಸ್ಟಾ ಡಿಪಿಯನ್ನು ‘ಲೋಡಿಂಗ್’ ಎನ್ನುವ ಫೋಟೋ ಆಗಿ ಬದಲಾಯಿಸಿದ ಕೂಡಲೇ ಅವರ ಮುಂದಿನ ಸಿನಿಮಾ ಘೋಷಣೆ ಬಗ್ಗೆ ಸುಳಿವು ಸಿಕ್ಕಿತ್ತು.ಇದೀಗ ಯಶ್ ತಮ್ಮ ಮುಂದಿನ ಸಿನಿಮಾ ಟೈಟಲ್ ಡಿಸೆಂಬರ್ 8 ಕ್ಕೆ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.