ಎಲ್ಲಿದ್ದೆ ಇಲ್ಲೀತನಕ: ಮಜಾ ನೀಡೋ ಸೃಜಾಗೆ ಅಪ್ಪನ ಭಯ!

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (18:32 IST)

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಚಿತ್ರ ಈ ತಿಂಗಳ 11ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ಸೃಜನ್ ಲೋಕೇಶ್ ನಾಯಕನಾಗಿ ನಟಿಸಿದ್ದಾರೆ.
yellidde illitanaka

ಈ ಸಿನಿಮಾ ಬಗ್ಗೆ ಈಗಾಗಲೇ ಸೃಜನ್ ಅವರ ಈ ಹಿಂದಿನ ಚಿತ್ರಗಳಿಗಿಂತ ವಿಶೇಷವಾದ ಕ್ರೇಜ್ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಹೊಸದ ಬಗೆಯ ಕಥೆಯ ಸುಳಿವು ಮತ್ತು ಹಾಡು ಮತ್ತು ಟ್ರೇಲರ್ ಸೃಷ್ಟಿಸಿರೋ ಸಂಚಲನ.
yellidde illitanaka
ಎಲ್ಲಿದ್ದೆ ಇಲ್ಲಿತನಕ ಅನ್ನೋ ಶೀರ್ಷಿಕೆಯ ಹಿಂದೆ ಸೃಜನ್ಗೆ ತನ್ನ ತಂದೆ ಲೋಕೇಶ್ರ ಮೇಲಿರೋ ಸೆಂಟಿಮೆಂಟ್ ಇದೆ. ಇದು ಲೋಕೇಶ್ ಅಭಿನಯಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದ ಎಲ್ಲೆದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ ಎಂಬ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡಿರೋ ಚಿತ್ರ. ಇದರ ಸಾಲನ್ನೇ ಶೀರ್ಷಿಕೆಯಾಗಿ ಆರಿಸಿಕೊಂಡಿರೋದರಿಂದಾಗಿ ಸೃಜನ್ ಅವರಲ್ಲೊಂದು ಜವಬ್ದಾರಿ ತುಂಬಿದ ಭಯವಿದೆ. ಅಪ್ಪನ ಸಿನಿಮಾ ಹಾಡಿನ ಸಾಲುಗಳನ್ನೇ ಶೀರ್ಷಿಕೆಯಾಗಿಸಿಕೊಂಡಿರೋ ಈ ಚಿತ್ರವನ್ನು ಆರಂಭದಿಂದಲೂ ಆ ಎಚ್ಚರಿಕೆಯಿಂದಲೇ ಸೃಜನ್ ರೂಪಿಸಿದ್ದಾರೆ.
yellidde illitanaka
ನಿರ್ದೇಶಕ ತೇಜಸ್ವಿಯವರಂತೂ ಇದು ತಮ್ಮ ಜವಾಬ್ದಾರಿಯೂ ಹೌದೆಂಬಂತೆ ತುಂಬಾನೇ ಆಸ್ಥೆಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆ. ಬರೀ ಕಥೆಗಾಗಿ ಅವರು ನಡೆಸಿದ ಸರ್ಕಸ್ಸುಗಳೇ ಈ ಸಿನಿಮಾವನ್ನು ಅವರೆಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂಬುದಕ್ಕೆ ಸ್ಪಷ್ಟ ಸಾಕ್ಷಿಯಂತಿದೆ.  ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಇದರ ಕಥೆಗಾಗಿ ಇಡೀ ತಂಡ ಶ್ರಮಿಸಿದೆ. ಅದೆಷ್ಟೋ ಕಥಾ ಎಳೆಗಳನ್ನು ರೂಪಿಸಿ ಕೈ ಬಿಟ್ಟಿದೆ. ಕಡೆಗೂ ಸೃಜನ್ ಅವರನ್ನು ಹೊಸಾ ಬಗೆಯಲ್ಲಿ ತೋರಿಸುವಂಥಾ, ಎಲ್ಲ ಅಂಶಗಳನ್ನೂ ಒಳಗೊಂಡ ಕಥೆಯನ್ನು ಆರಿಸಿಕೊಂಡು ಅದಕ್ಕೆ ಎಲ್ಲಿದ್ದೆ ಇಲ್ಲಿತನಕ ಎಂಬ ನಾಮಕರಣ ಮಾಡಲಾಗಿದೆ. ಈ ಚಿತ್ರ ಇದೇ ತಿಂಗಳ 11 ರಂದು ತೆರೆಗಾಣಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಲ್ಲಿದ್ದೆ ಇಲ್ಲಿತನಕ: ಇದು ಸೃಜಾ ಕೆರಿಯರ್ನಲ್ಲೇ ಸ್ಪೆಷಲ್ ಸಿನಿಮಾ!

ಲೋಕೇಶ್ ಅವರು ನಟಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದಲ್ಲಿ `ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ’ ...

news

ಡಿ ಬಾಸ್ ದರ್ಶನ್ ಎರಡು ಚಿತ್ರಗಳಿಗೆ ಜತೆಯಾಗಿ ಕೆಲಸ ಮಾಡಲಿರುವ ಅರ್ಜುನ್ ಜನ್ಯಾ, ವಿ ಹರಿಕೃಷ್ಣ

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಟ್ಯಾಲೆಂಟೆಡ್ ಸಂಗೀತ ನಿರ್ದೇಶಕರಾದ ವಿ ಹರಿಕೃಷ್ಣ ಮತ್ತು ಅರ್ಜುನ್ ...

news

ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ ರೆಬಲ್ ಸ್ಟಾರ್ ...

news

ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ 7 ನೇ ಆವೃತ್ತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಈ ಶೋನಲ್ಲಿ ಪ್ರಮುಖ ...