ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿತನಕ. ತೇಜಸ್ವಿ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 11ರಂದು ತೆರೆಗಾಣುತ್ತಿದೆ. ಈಗಾಗಲೇ ಮೋಹಕ ಹಾಡುಗಳು ಮತ್ತು ಪ್ರಾಮಿಸಿಂಗ್ ಟ್ರೇಲರ್ ಮೂಲಕ ಎಲ್ಲರನ್ನು ತಲುಪಿಕೊಂಡಿರೋ ಈ ಚಿತ್ರ ಬರೀ ಸೃಜನ್ ಲೋಕೇಶ್ ಪಾಲಿಗೆ ಮಾತ್ರವಲ್ಲದೇ, ಪ್ರೇಕ್ಷಕರಲ್ಲಿಯೂ ಸ್ಪೆಷಲ್ ಫೀಲ್ ಹುಟ್ಟಿಸ ಬಲ್ಲ ಸಿನಿಮಾ ಆಗಿತ್ತದೆಂಬ ನಂಬಿಕೆ ಚಿತ್ರತಂಡದಲ್ಲಿದೆ. ಸೃಜನ್ ಲೋಕೇಶ್ ಇಲ್ಲಿ ಚಾಲೆಂಜಿಂಗ್ ಆದ ಪಾತ್ರವನ್ನು ಆರಿಸಿಕೊಂಡಿದ್ದಾರೆ.