ಬೆಂಗಳೂರು: ಅಜಯ್ ದೇವಗನ್-ಕಿಚ್ಚ ಸುದೀಪ್ ನಡುವೆ ನಡೆದ ಹಿಂದಿ ಭಾಷೆ ಕುರಿತಾದ ಟ್ವೀಟ್ ವಾರ್ ಬಗ್ಗೆ ಪ್ರತಿಕ್ರಿಯಿಸುವಾಗ ತಪ್ಪು ಅರ್ಥ ಬರುವಂತೆ ಹೇಳಿಕೆ ನೀಡಿದ್ದ ನಿರ್ದೇಶಕ ಯೋಗರಾಜ್ ಭಟ್ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಯೋಗರಾಜ್ ಭಟ್ ಈ ಮೊದಲು ಪತ್ರಕರ್ತರು ಕೇಳಿದ ಪ್ರಶ್ನೆಗೆ ನನಗೆ ಹಿಂದಿಯೂ ಗೊತ್ತು, ಕನ್ನಡವೂ ಗೊತ್ತು ಎಂದು ಹಿಂದಿ ರಾಷ್ಟ್ರಭಾಷೆ ಎಂಬ ಅರ್ಥ ಬರುವಂತೆ ವಿವಾದಿತವಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ನೆಟ್ಟಿಗರಿಂದ ತೀವ್ರ