ಬೆಂಗಳೂರು: ಪಂಚತಂತ್ರ ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಯೋಗರಾಜ್ ಭಟ್ಟರು ಇದೀಗ ಎರಡನೇ ಭಾಗ ನಿರ್ಮಿಸಲು ಮುಂದಾಗಿದ್ದಾರೆ.ಪಂಚತಂತ್ರ ಈಗಾಗಲೇ ಯಶಸ್ವಿಯಾಗಿ 25 ನೇ ದಿನ ಪೂರೈಸಿದ್ದು, ಇದೀಗ ಎರಡನೇ ಭಾಗಕ್ಕೆ ಸಿದ್ಧತೆ ನಡೆದಿದೆಯಂತೆ. ಈ ಬಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಭಟ್ಟರು ತಯಾರಿ ನಡೆಸಿದ್ದಾರೆ.ಏಕಕಾಲಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಖ್ಯಾತ ನಟನನ್ನೇ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಭಟ್ಟರು ಚಿಂತನೆ ನಡೆಸಿದ್ದಾರೆ. ರೇಸ್ ಹಿನ್ನಲೆಯ ಕತೆಯನ್ನೊಳಗೊಂಡ ಸಿನಿಮಾ ಯಶಸ್ವಿಯಾಗಿ